ಉಡುಪಿ, ಕಾರ್ಕಳ, ಸಾಲಿಗ್ರಾಮ ದೇವಾಡಿಗ ಸಂಘಗಳ ವತಿಯಿಂದ ಸಚಿವ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ.

ಉಡುಪಿ, ಕಾರ್ಕಳ, ಸಾಲಿಗ್ರಾಮ ದೇವಾಡಿಗ ಸಂಘಗಳ ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ, ವಾದ್ಯ ಕಲಾವಿದರಿಗೆ ಪರಿಹಾರ ನೀಡುವಂತೆ ಸಚಿವರಿಗೆ ಮನವಿ ನೀಡಲಾಯಿತು,

ಈ ತಂಡದಲ್ಲಿ ರವೀಂದ್ರ ಮೊಯ್ಲಿ, ಗಣೇಶ್ ಸೇರಿಗಾರ ಬ್ರಹ್ಮಗಿರಿ, ಜಿ ಎಸ್ ರತ್ನಾಕರ, ಕೃಷ್ಣ ಸೇರಿಗಾರ ಕನ್ನಾರ್ಪಡಿ, ನರಸಿಂಹ ದೇವಾಡಿಗ, ರವಿ ದೇವಾಡಿಗ ತಲ್ಲೂರು, ಸ್ಯಾಕ್ಸೋಫೋನ್ ವಾದಕ ಪ್ರಕಾಶ್ ಕಾರ್ಕಳ  ಹಾಗೂ ಇತರರು ಉಪಸ್ಥಿತರಿದ್ದರು, 

ಹಾಗೇನೇ ಸಭೆ ಸಮಾರಂಭ ಗಳಲಿ ಕನಿಷ್ಠ 3 ಜನ ವಾದ್ಯ ಕಲಾವಿದರಿಗೆ ಅವಕಾಶ ನೀಡಬೇಕೆಂದು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಕಲಾವಿದರ ಪರವಾಗಿ;  ಕಾರ್ಕಳದ ಸಪ್ತಸ್ವರ ವಾದ್ಯ ಕಲಾವಿದರ ಸಂಘದ ಮನವಿಯನ್ನು ಸಚಿವರಿಗೆ ಶ್ರೀ ಪ್ರಕಾಶ ಕಾರ್ಕಳ ನೀಡಿದರು..‌‌


Share