ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಮಾವತಿ ದೇವಾಡಿಗರ ಮನವಿಗೆ ಶಾಸಕ ರಘುಪತಿ ಭಟ್‌ ಸ್ಪಂದನೆ

ಉಡುಪಿ: ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ಊರಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿ ಇರುವ ತನ್ನ ಗಂಡನನ್ನು ನೋಡಲು ಮುಂಬಯಿನಿಂದ ಸುರತ್ಕಲ್‌ಗೆ ಬರಬೇಕಾದ ಹೇಮಾವತಿ ದೇವಾಡಿಗ ಮತ್ತು ಅವರ ಪುತ್ರ ಬ್ರಹ್ಮಾವರ‌ದಲ್ಲಿ ಸರಕಾರಿ ಕ್ವಾರಂಟೈನ್‌ಗೆ ಒಳಗಾಗಿದ್ದರು

 ಸೋಮವಾರ ಶಾಸಕ ಕೆ. ರಘುಪತಿ ಭಟ್‌ ಅವರು ಕ್ವಾರಂಟೈನ್‌ಗೆ ಭೇಟಿ ನೀಡಿದಾಗ ಅನಾರೋಗ್ಯದಿಂದ ಗಂಭೀರ ಸ್ಥಿತಿಯಲ್ಲಿ ಇರುವ ನನ್ನ ಪತಿಯನ್ನು ನೋಡಲು ಅವಕಾಶ ಮಾಡಿಕೊಡಿ ಎಂದು ಹೇಮಾವತಿ ಕಣ್ಣೀರಿಟ್ಟರು.

ತತ್‌ಕ್ಷಣ ಸ್ಪಂದಿಸಿದ ಶಾಸಕರು ಅವರನ್ನು ಕಳುಹಿಸಿ ಕೊಡಲು ಡಿಸಿಯವರಲ್ಲಿ ಚರ್ಚಿಸಿ ಉಡುಪಿಯಿಂದ ಸುರತ್ಕಲ್‌ವರೆಗೆ ಬಿಟ್ಟು ಬರಲು ತನ್ನ ಸ್ವಂತ ಖರ್ಚಿನಿಂದ ವಾಹನದ ವ್ಯವಸ್ಥೆಯನ್ನು ಮಾಡಿದರು.


Share