"ಯಕ್ಷಗಾನ ಅದ್ಯಯನ ಗಳ ತಾತ್ವಿಕತೆ" ಸಂಶೋಧನಾ ಮಹಾ ಪ್ರಬಂಧಕ್ಕೆ  ಚಂದ್ರಹಾಸ .ಜಿ. ಕಣ್ವತೀರ್ಥ ರಿಗೆ ಪಿ.ಎಚ್.ಡಿ ಪದವಿ

ಮಂಗಳೂರು: ಅಮೃತ ಕಾಲೇಜು ಪಡೀಲ್ ಮಂಗಳೂರು ಇಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಹಾಸ .ಜಿ. ಕಣ್ವತೀರ್ಥ ಇವರು ಬಂಟ್ವಾಳ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾl ಗಿರೀಶ್ ಭಟ್. ಎ. ರವರ ಮಾರ್ಗದರ್ಶನ ದಲ್ಲಿ 'ಕರ್ನಾಟಕ ಥಿಯೋಲಾಜಿಕಲ್ ಸೆಂಟರ್ ಬಲ್ಮಠ ಮಂಗಳೂರು ಮಾನ್ಯತಾ ಸಂಸ್ಥೆಯ ಮೂಲಕ ಸಲ್ಲಿಸಿದ "ಯಕ್ಷಗಾನ ಅದ್ಯಯನ ಗಳ ತಾತ್ವಿಕತೆ" ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.

ಇವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಪದಾಧಿಕಾರಿಗಳು, ವಿದ್ಯಾರ್ಥಿ ಬಳಗವು ಅಭಿನಂದನೆ ಸಲ್ಲಿಸಿದೆ.

 

 


Share