ಬಾರ್ಕೂರು: ನಮ್ಮ ಸಮುದಾಯದ ಅಪರೂಪದ ಬ್ರಹ್ಮೋಪದೇಶ! : ಬಾಲಕ ಅಭಿರಾಮ ಜೆ ದೇವಾಡಿಗರಿಗೆ ಉಪನಯನ

ಬಾರ್ಕೂರು: ಅಭಿರಾಮ ದೇವಾಡಿಗ (11) ರಿಗೆ ಇಂದು ಜೂ.11,2020 ಶ್ರೀ ಏಕನಾಥೇಶ್ವರಿ ದೇವಸ್ಥಾನ, ಬಾರಕೂರಿನಲ್ಲಿ ವಿಧಿವತ್ತಾದ ಧಾರ್ಮಿಕತೆ ಸಂಸ್ಕಾರ ಕರ್ಮಕ್ರಿಯೆ ಗಳೊಂದಿಗೆ ಬ್ರಹ್ಮೋಪದೇಶ ನೀಡಲಾಯಿತು. ಏಕನಾಥೇಶ್ವರಿ ದೇವಸ್ಥಾನದ ಬ್ರಾಹ್ಮಣ ಪುರೋಹಿತರು ಈ ಉಪನಯನ ಸಂಸ್ಕಾರ ಗಳನ್ನು ವಿಧಿವಿತ್ತಾಗಿ ನೆಡಿಸಿ ಕೊಟ್ಟರು.

ಅಭಿರಾಮ ದೇವಾಡಿಗರು ಬೈಂದೂರಿನ ಜನಪ್ರಿಯ ಅದ್ಯಾಪಕ ಶ್ರೀ ಜನಾರ್ಧನ ದೇವಾಡಿಗ, ಬೈಂದೂರು(ಇವರ ಪೋಶಕರು: ದಿ.ಲಕ್ಷ್ಮಿ ದೇವಿ ಬೆಸ್ಕೂರು ಹಾಗೂ ದಿ.ಅಬ್ಬು ರಾಮ ದೇವಾಡಿಗ ) ಮತ್ತು ಶ್ರೀಮತಿ..............ಯವರ ಪುತ್ರ

Abhiram J.Devadiga (11) son of Janardhana Devadiga, Teacher, Byndoor, who belongs to a well known Beskoor family of Bijoor/ Byndoor  had 'Upanayanam Samskaara' duly performed in Vedic rituals by Bhrahmin Purohits at Shri. Ekanatheshwari Temple Barkur 

ಉಪನಯನ -

    • ಹುಡುಗನಿಗೆ ಎಂಟು-ಹತ್ತು ವರ್ಷಗಳು ತುಂಬಿದನಂತರ ಮುಂಜಿ (ಬ್ರಹ್ಮೋಪದೇಶ) ಮಾಡುತ್ತಾರೆ. ಹುಡುಗನನ್ನು ಹಸೆಯಮೇಲೆ ಕೂರಿಸಿ ತಲೆಗೆ ಒಂದುಬಟ್ಟು ಕೊಬರಿಎಣ್ಣೆಯನ್ನು ಅರಿಶಿನದೊಂದಿಗೆ ಹಚ್ಚಿ ಆರತಿಮಾಡುತ್ತಾರೆ. ಕ್ಷೌರಿಕನು ಬಂದಮೇಲೆ ಹುಡುಗನ ತಲೆಯಲ್ಲಿ ಗೋಪಾದದಷ್ಟು ಕೂದಲನ್ನು ಬಿಟ್ಟು ಉಳಿದೆಲ್ಲವನ್ನೂ ಕತ್ತರಿಸುತ್ತಾನೆ. ಸ್ನಾನವಾದಮೇಲೆ ತಾಯಿ-ಮಗ ಒಂದೇ ಎಲೆಯಲ್ಲಿ ಊಟಮಾಡುತ್ತಾರೆ. ಹುಡುಗನಿಗೆ ಆ ದಿನ ಅರಿಶಿನದನೀರಿನಲ್ಲಿ ಅದ್ದಿ ಒಣಹಾಕಿದ ಪಂಚೆ ಉಡುವುದಕ್ಕು, ಹೊದೆಯುವುದಕ್ಕು ಕೊಡುತ್ತಾರೆ. ಕೌಪೀನಕ್ಕೂ ಅರಿಶಿನದಬಟ್ಟೆಯೆ. ಸೊಂಟಕ್ಕೆ ನೊಜೆಹುಲ್ಲಿನಿಂದ ಮಾಡಿದ ದಾರ (ಮೌಂಜಿ). ಒಂಟಿ ಜನಿವಾರ, ಕೈಗೊಂದು ಮುತ್ತುಗಮರದ ರೆಂಬೆ. ಮುಂಜಿಯಾದ ದಿನದಿಂದ ಅವನನ್ನು ಬ್ರಹ್ಮಚಾರಿ ಎನ್ನುತ್ತಾರೆ.
    •  
    • ಮುಂಜಿಯ ಶಾಸ್ತ್ರಗಳು ಮುಗಿದಮೇಲೆ ಮುತ್ತೈದೆಯರು ಬ್ರಹ್ಮಚಾರಿಗೆ ಭಿಕ್ಷೆ ನೀಡುತ್ತಾರೆ. ನಂತರ ಬ್ರಹ್ಮಚಾರಿಯನ್ನು ಓಲಗಸಮೇತ ಊರ ಹೊರಗಿನ ಅರಳಿಮರದ ಹತ್ತಿರ ಕರೆದುಕೊಂಡುಹೋಗಿ ಮುತ್ತುಗದ ರೆಂಬೆಯನ್ನು ಮಣ್ಣಿನಗುಡ್ಡೆ ಮಾಡಿ ಅದರಲ್ಲಿ ನೆಡುತ್ತಾರೆ. ಆ ದಿನದಿಂದ ಅವನು ಶಾಸ್ತ್ರೋಕ್ತವಾದ ನಿಯಮಗಳನ್ನು (ಪ್ರಾತಃಸಂಧ್ಯಾವಂದನೆ, ಔಪಾಸನೆ, ಮಾಧ್ಯಾಹ್ನಿಕ, ಸಂಜೆ ಸಂಧ್ಯಾವಂದನೆ) ಪಾಲಿಸಬೇಕು. ಚಾಪೆಯಮೇಲೆ ಮಲಗಬೇಕು. ಇವೆಲ್ಲವೂ ಬ್ರಹ್ಮಚಾರಿಯಾದವನು ಅನುಸರಿಸಬೇಕಾದ ವಿಧಿಗಳು.
    •  
    • ಅಲ್ಲಿಂದ ಮುಂದೆ ಅವನು ಕೆಲವಾರು ವರ್ಷಗಳು ಗುರುಕುಲಾಭ್ಯಾಸ ಮಾಡುತ್ತಾನೆ. ಗುರುವಿನ ಆಶೀರ್ವಾದ ಪಡೆದು ಮನೆಗೆ ಹಿಂತಿರುಗುತ್ತಾನೆ.

Share