ಹಿರಿಯಡಕ: ದೇವಾಡಿಗ ಯುವ ಸಂಘಟನೋತ್ಸವ - 7 ಲಕ್ಷ ರೂ. ಆರ್ಥಿಕ ನೆರವು ವಿತರಣೆ!

ಹಿರಿಅಡ್ಕ : ಹಿರಿಯಡಕ ದೇವಾಡಿಗರ ಯುವ ಸಂಘಟನೆ ಹಲವಾರು ವರ್ಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅಶಕ್ತರಿಗೆ ವೈದ್ಯಕೀಯ/ಆರ್ಥಿಕ ನೆರವು, 480ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಧಕರನ್ನು ಗರುತಿಸಿ ಗೌರವಿಸುವ ಮೂಲಕ ಮಾದರಿ ಸಂಘಟನೆಯಾಗಿದೆ ಎಂದು ಶಾಸಕ ವಿನಯ ಕುಮಾರ್‌ ಸೊರಕೆ ಹೇಳಿದರು.

ಅವರು ರವಿವಾರ ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಉಪಸಂಘ ಹಿರಿಯಡಕದ ಆಶ್ರಯದಲ್ಲಿ ಹಿರಿಯಡಕದಲ್ಲಿ ನಡೆದ ದೇವಾಡಿಗ ಯುವ ಸಂಘ ಟನೆಯ ಸಂಘಟನೋತ್ಸವವನ್ನು  ಉದ್ಘಾಟಿಸಿ ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ, ಅಂಗವಿಕಲರಿಗೆ ನೆರವು, ವಿದ್ಯಾರ್ಥಿವೇತನ ಸೇರಿದಂತೆ 7 ಲಕ್ಷ ರೂ.ಗಳಿಗೂ ಅಧಿಕ ಆರ್ಥಿಕ ನೆರವನ್ನು ವಿತರಿಸಲಾಯಿತು.

ಹಿರಿಯಡಕ ದೇವಾಡಿಗರ ಸಂಘದ ಅಧ್ಯಕ್ಷ ಸದಾನಂದ ಸೇರಿಗಾರ್‌ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ಮುಂಬಯಿ ದೇವಾಡಿಗರ ಸಂಘದ ಅಧ್ಯಕ್ಷ ರವಿ ಎಸ್‌. ದೇವಾಡಿಗ, ಕುಕ್ಕಿಕಟ್ಟೆ ನಾದಶ್ರೀ ಸೇವಾ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಶ್ರೀಧರ ದೇವಾಡಿಗ, ಉದ್ಯಮಿ ಉದಯ ಕುಮಾರ್‌ ಶೆಟ್ಟಿ ಮುನಿಯಾಲು, ಅದಾನಿ ಗ್ರೂಪ್‌ನ‌ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ, ಕುಯಿಲಾಡಿ ಸುರೇಶ್‌ ನಾಯಕ್‌, ಮಾಲತಿ ಭಾಸ್ಕರ ಆಚಾರ್ಯ, ಸಂತೋಷ ಕುಲಾಲ್‌, ರತ್ನಾಕರ ಆಚಾರ್ಯ, ಪ್ರಕಾಶ್‌ ಪ್ರಭು, ಅನ್ವರ್‌ ಹುಸೇನ್‌, ಕುದಿ ಚರಣ್‌ ವಿಠಲ ಮೊದಲಾದವರು ಉಪಸ್ಥಿತರಿದ್ದರು.

ಯುವ ಸಂಘಟನೆಯ ಅಧ್ಯಕ್ಷ ಎಚ್‌. ಸುರೇಶ್‌ ಪ್ರಸ್ತಾವನೆಗೈದರು. ಸಂಘಟನ ಕಾರ್ಯದರ್ಶಿ ರತ್ನಾಕರ ದೇವಾಡಿಗ ಸ್ವಾಗತಿಸಿ,   ಕಾರ್ಯದರ್ಶಿ ಶಶಿಧರ ದೇವಾಡಿಗ ವಂದಿಸಿದರು. ಉಪೇಂದ್ರ ಆಚಾರ್ಯ ಹಾಗೂ ನಳಿನಾ ದೇವಿ ಎಂ.ಆರ್‌. ಕಾರ್ಯಕ್ರಮ ನಿರ್ವಹಿಸಿದರು.

 


Share