ವೇಣೂರು ದೇವಾಡಿಗರ ಸೇವಾ ವೇದಿಕೆ: ಪ್ರತಿಭಾ ಪುರಸ್ಕಾರ ಸಮಾರಂಭ

 

 

ವೇಣೂರು ದೇವಾಡಿಗರ ಸೇವಾ ವೇದಿಕೆ: ಪ್ರತಿಭಾ ಪುರಸ್ಕಾರ ಸಮಾರಂಭಶಿಕ್ಷಣಕ್ಕೆ ಪ್ರೋತ್ಸಾಹ, ಬೆಂಬಲ ನೀಡುತ್ತಿರುವ ವೇದಿಕೆಯ ಕಾರ್ಯ ಶ್ಲಾಘನೀಯ - ಶಾಸಕ ಬಂಗೇರ

ದೇವಾಡಿಗರ ವೇದಿಕೆಯ ವಿದ್ಯಾನಿಧಿಗಾಗಿ ಶಾಸಕ ಕೆ. ವಸಂತ ಬಂಗೇರ ಅವರು ರೂ. 10 ಸಾವಿರ ಮೊತ್ತವನ್ನು ವೇದಿಕೆಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ವೇಣೂರು: ನಮ್ಮ ಹಿಂದುಳಿದ ಜನಾಂಗದ ಪೂರ್ವಜರು ತುಳಿತಕ್ಕೊಳಗಾಗಿದ್ದರು, ಅವಮಾನದಿಂದ ಬದುಕುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ವಿದ್ಯಾಭ್ಯಾಸ, ಬುದ್ದಿಶಕ್ತಿಯಿಂದ ನಾವು ಬಲಿಷ್ಠವಾಗಬೇಕು. ತಮ್ಮ ಸಮುದಾಯದ ಜೊತೆಗೆ ಇತರ ಸಮುದಾಯ ಶಿಕ್ಷಣಕ್ಕೆ ಪ್ರೋತ್ಸಾಹ, ಬೆಂಬಲ ನೀಡುತ್ತಿರುವ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅ. 22ರಂದು ವೇಣೂರು ವಲಯ ದೇವಾಡಿಗರ ಸೇವಾವೇದಿಕೆ ವತಿಯಿಂದ ನಿಟ್ಟಡೆ ದೇವಾಡಿಗರ ಸಮುದಾಯ ಭವನದಲ್ಲಿ ಜರಗಿದ ಸಮ್ಮಾನ, ಅಭಿನಂದನೆ, ಪ್ರತಿಭಾ ಪುರಸ್ಕಾರ ಹಾಗೂ ಖಾಯಂ ವಿದ್ಯಾರ್ಥಿ ವೇತನ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.ಬಡತನದಲ್ಲಿರುವವರನ್ನು ಮೇಲೆತ್ತುವ ಕೆಲಸ ಜಾತಿ ಸಂಘಟನೆಗಳ ಮೂಲ ಧ್ಯೇಯ ಆಗಬೇಕು. ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪರಿಪೂರ್ಣ ಶಿಕ್ಷಣದಿಂದ ದೇಶದ ಬಡತನ ನಿವಾರಣೆ ಸಾಧ್ಯ ಎಂದರು.

ವೇದಿಕೆಯ ಕಾರ್ಯದರ್ಶಿ ಜಗನ್ನಾಥ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, 2010ರಲ್ಲಿ ನಿರ್ಮಾಣ ಮಾಡಲಾದ ಸಮುದಾಯ ಭವನದ ನಿರ್ಮಾಣಕ್ಕೆ ಸಂಸದರು, ಶಾಸಕರು ಅನುದಾನದಿಂದ ಇದು ಸಾಧ್ಯ ಆಗಿದೆ. ಊರವರ ದೇಣಿಗೆ ಹಾಗೂ ಉದ್ಯಮಿಗಳ ಸಹಕಾರ ಅವಿಸ್ಮರಣೀಯ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ವಿ. ಅಶೋಕ್ ದೇವಾಡಿಗ ವಹಿಸಿದ್ದರು. 

 

ಸನ್ಮಾನ: ಧರ್ಮಸ್ಥಳ ಗ್ರಾ.ಯೋ. ನಿವೃತ್ತ ಹಿರಿಯ ಪ್ರಬಂಧಕ ಶೀನ ದೇವಾಡಿಗ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ವಿದ್ಯಾರ್ಥಿವೇತನ: ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ 5 ರಿಂದ 9ನೇ ತರಗತಿ ತರಗತಿವಾರು ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸುಬ್ರಹ್ಮಣ್ಯ ಪ್ರಸಾದ್ ವಿದ್ಯಾನಿಧಿ ವಿತರಣೆ ಮಾಡಲಾಯಿತು. ವಿವಿಧ ಆಟೋಟಗಳು ಹಾಗೂ ಸಾಂಸ್ಕøತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಗಲಿದ ಸಮುದಾಯದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಬೆಳ್ತಂಗಡಿ ಪಂ.ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚೆನ್ನಪ್ಪ ಮೊಯ್ಲಿ, ವೇಣೂರಿನ ಉದ್ಯಮಿ ಭಾಸ್ಕರ ಪೈ, ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಬಿ. ಕೃಷ್ಣಮೂರ್ತಿ, ವೇಣೂರಿನ ಮೋಹನದಾಸ ಹೆಗ್ಡೆ, ಉಡುಪಿ ನಾದಶ್ರೀ ಕ್ರೇಡಿಟ್ ಕೋ ಅಪರೇಟಿವ್ ಸೊಸೈಟಿಯ ಕಾರ್ಯದರ್ಶಿ ಕಾರ್ತಿಕ್ ಕುಮಾರ್, ಮಣಿಪಾಲ ಯುನಿವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಪ್ರವೀಣ್ ಕುಮಾರ್, ನಾರಾವಿಯ ರಘು ದೇವಾಡಿಗ, ಬೆಳ್ತಂಗಡಿ ದೇವಾಡಿಗರ ಯುವ ವೇದಿಕೆಯ ಅಧ್ಯಕ್ಷ ಯೋಗೀಶ್ ದೇವಾಡಿಗ, ಮಹಿಳಾ ವೇದಿಕೆಯ ಅಧ್ಯಕ್ಷೆ ಜ್ಯೋತಿ ಪ್ರಶಾಂತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಟ್ಟಡ ನಿರ್ಮಾಣ ಸಮಿತಿ ಕಾರ್ಯದರ್ಶಿ ಅಶೋಕ್ ಜಿ. ಅಂಡಿಂಜೆ ಸ್ವಾಗತಿಸಿ ಜ್ಯೋತಿ ಪ್ರಶಾಂತ್ ಉಡುಪಿ ವಂದಿಸಿದರು. ಸುಮತಿ ಪುರಂದರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.ಕು| ವರ್ಷಾ, ಕು| ಸ್ಪಂದನ, ಕು| ಭವಿತಾ ದೇವಾಡಿಗ, ವಸಂತಿ ಪುರಂದರ, ಕುಸುಮಾ ಅಂಪುಗೇರಿ, ಕು| ದೀಕ್ಷಿತಾ ನಡುಕುಮೇರು, ಪದ್ಮಪ್ರಸಾದ್ ದೇವಾಡಿಗ ಹಾಗೂ ಸಮಿತಿ ಪದಾಧಿಕಾರಿಗಳು ಸಹಕರಿಸಿದರು.

ಮಕ್ಕಳ ಶಿಕ್ಷಣದಿಂದ ಸಮಾಜ ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಿಷ್ಠ ಆಗುತ್ತದೆ. ಅದಕ್ಕಾಗಿ ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ದೇವರ ಮೇಲೆ ಭಯ-ಭಕ್ತಿ ಬೇಕು. ಭಯ ತಪ್ಪು ಕಾರ್ಯಗಳಿಂದ ವಿಮುಖವಾಗಲು ಸಹಾಯವಾದರೆ ಭಕ್ತಿ ನಮ್ಮನ್ನು ಬಲಿಷ್ಠ ಮಾಡುತ್ತದೆ:  ಕೆ. ವಸಂತ ಬಂಗೇರ, ಶಾಸಕರು 


Share