ದೇವಾಡಿಗ ಸುದಾರಕ ಸಂಘ (ರಿ) ಎಲ್ಲೂರು; ವಾರ್ಷಿಕ ಮಹಾಸಭೆ: ಸಹಾಯಾರ್ಥ ಧೇಣಿಗೆ- ನೆರವು

 

ಎಲ್ಲೂರು: ವಾರ್ಷಿಕ ಮಹಾಸಭೆಯು ದಿನಾಂಕ 17.04.2016 ರ ಆದಿತ್ಯವಾರ ಸಂಘದ ಗವುರವ ಅದ್ಯಕ್ಷರಾದ ಶ್ರೀ ವಾಸುದೇವ ಮೊಇಲಿ ರವರ ಅದ್ಯಕ್ಷತೆಯಲ್ಲಿ ನಡೆಯಿತು.

ವಾರ್ಷಿಕ ವರದಿಯನ್ನು ಕಾರ್ಯದರ್ಶಿ ನಾಗೇಶ್ ದೇವಾಡಿಗ ಓದಿದರು.

ವಾರ್ಷಿಕ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಶಶಿಕಲಾ ದೇವಾಡಿಗ ಮಂಡಿಸಿದರು.

ಸಂಘದ ಅದ್ಯಕ್ಷರಾದ ಯೋಗೀಶ ದೇವಾಡಿಗ ರವರು ಮಾತನಾಡಿ ತಮ್ಮ ಅವಧಿ ಯಲ್ಲಾದ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿ ಪ್ರಸ್ತುತ ಕಾರ್ಯಕಾರಿ ಸಮಿತಿಯು ತನ್ನ ವದಿಯನ್ನು ಪೂರೈಸಿದ್ದು ಹೊಸ ಸಮಿತಿ ರಚಿಸುವ ಸಲುವಾಗಿ ವಿಷಯ ಮಂಡಿಸಿದರು.

ಈ ಸಮಿತಿಯು ಉತ್ತಮ ಕೆಲಸ ಕಾರ್ಯ ಗಳನ್ನು ಮಾಡುತ್ತಿದ್ದು ಇದೇ ಸಮಿತಿ ಮುಂದುವರಿಯಬೇಕೆಂದು ನೆರೆದಿದ್ದ ಸದಸ್ಯರು ಸೂಚಿಸಿದರು.

ನೂತನ ಸಮಿತಿಯ ಪರವಾಗಿ ಮಾತಾಡಿದ ಸಂಘದ ಅದ್ಯಕ್ಷರು ಸಮಾಜ ಭಾಂದವರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

ಮುಂಬಯಿ ದೇವಾಡಿಗರ ಸಂಘದ ಪದಾಧಿಕಾರಿಯಾದ ಸುಧಾಕರ ದೇವಾಡಿಗ ಎಲ್ಲೂರು ಮುಖ್ಯ ಅತಿಥಿ ಯಾಗಿದ್ದರು.

ಪ್ರವೀಣ ದೇವಾಡಿಗ ಬಂಡಸಾಲೆ, ದಯಾನಂದ ದೇವಾಡಿಗ, ಶಶಿಧರ ದೇವಾಡಿಗ ಉಪಸ್ಥಿತರಿದ್ದರು.

ಸತೀಶ್ ದೇವಾಡಿಗ ಮಾಣಿಯೂರು ಕಾರ್ಯಕ್ರಮ ನಿರ್ವಹಿಸಿದರು.
ಮನಿಳಾ ಸಂಘಟನೆ ಅದ್ಯಕ್ಷೆ ಜ್ಯೋತಿ ದೇವಾಡಿಗ ವಂದಿಸಿದರು.

 ಕುಂಜೂರಿನ ನಿವಾಸಿ ಪೂರ್ಣಿಮ ದೇವಾಡಿಗರವರ ಪತಿ ಸತೀಶ್ ದೇವಾಡಿಗರವರು ಉಡುಪಿಯ ಆಸ್ಪತ್ರೆಯೊಂದರಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು ಅವರ ಸಹಾಯಾರ್ಥವಾಗಿ ಇಂದಿನ ಸಭೆಯಲ್ಲಿ ಅವರ ತುರ್ತು ಆವಶ್ಯಕತೆಯ ಸಲುವಾಗಿ ಸ್ಥಳದಲ್ಲಿಯೇ ಸಂಗ್ರಹವಾದ ರೂ 5500 ವನ್ನು ಅವರ ಮನೆಯವರಿಗೆ ಸಂಘದ ಅದ್ಯಕ್ಷರು ಹಸ್ತಾಂತರಿಸಿದರು.

ಕ್ಷಿಪ್ರವಾಗಿ ದೇಣಿಗೆ ನೀಡಿ ಸಹಕರಿಸಿ ಹ್ರದಯ ವೈಶಾಲ್ಯತೆ ಮೆರೆದ ಎಲ್ಲ ಸದಸ್ಯರಿಗೂ ತುಂಬು ಹ್ರದಯದ ದನ್ಯವಾದಗಳು

 


Share