ವಿಶ್ವ ಮಹಿಳಾ ದಿನಾಚರಣೆ ಸುತ್ತ ಒಂದು ನೋಟ

 

ವಿಶ್ವ ಮಹಿಳಾ ದಿನದಂದು ಹೆಚ್ಚಿನ ಕಡೆಗಳಲ್ಲಿ ಸಭೆ ಸಮಾರoಭಗಳನ್ನು ನಡೆಸಿ ಮಹಿಳೆಯರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿ ಬಿಡುತ್ತಾರೆ. ನಂತರ ಮುoದಿನ ದಿನ ಅದೇ ಬದುಕು ಅದೇ ಅಸಮಾನತೆ. ಹೆಣ್ಣನ್ನು ದೇವಿ, ಮಾತೆಗೆ ಹೋಲಿಸಿ ನಂತರ ಅವಳನ್ನು ದೇವಸ್ಥಾನ (  ಶಬರಿ ಮಲೆ ) ಮತ್ತು ದರ್ಗಾ ಪ್ರವೇಶಕ್ಕೇ ನಿರ್ಭಂದವಿಧಿಸುವುದು ಯಾವ ರೀತಿಯ  ಸಮಾನತೆಯ ಪರಿ. ಸಾಮಾಜಿಕ ಸಮಾನತೆಯ ಎದುರು ಧಾರ್ಮಿಕತೆ ಬಂದಾಗ ಹೆಣ್ಣಿನ ಶೋಷಣೆಯಾದದ್ದು ಯಾರೂ ಸೊಲ್ಲೆತ್ತುವುದಿಲ್ಲ. ಹಿoದಿನ ಬೆತ್ತಲೆ ಸೇವೆಯ ಅಡಿಯಲ್ಲೋ ಯಾ ದೇವದಾಸಿ ಪದ್ದತಿಯ ಅಡಿ ದೇವರ ಹೆಸರಲ್ಲಿ ಶೋಷಣೆಗೆ ಒಳಗಾದದ್ದು ಹೆಣ್ಣೇ. ಈಗಲೂ ಮುಸ್ಲಿಮ್ ವರ್ಗದಲ್ಲಿ ಹೆಣ್ಣು ಬುರ್ಖಾದಡಿಯಲ್ಲೇ ಬದುಕುತ್ತಿರುವುದು ಹೆಣ್ಣಿನ ಶೋಷಣೆಯಲ್ಲದೆ ಮತ್ತೇನು ಅಲ್ಲ. ಮುಸ್ಲಿಮ್ ಕಾನೂನಿನಲ್ಲಿ ಒಂದಲ್ಲ ಎರಡಲ್ಲ ಮೂರು ಅವಕಾಶ ಪುರುಷರಿಗೆ ಕೊಟ್ಟು ಹೆಣ್ಣೇ ಶೋಷಿತಲಾಗುತ್ತೀರುವುದು ನಗ್ನ ಸತ್ಯ ಆದರೂ ಸಮಾವೇಶ ಮಾಡಿ ಒಂದಸ್ಟ್ ಭಾಷಣಗಳ ಮಳೆ ಹರಿಸಿದರೆ ಸಮಾನತೆ ಬರುತ್ತದೇಯೇ?.

ಕೆಲವು ದಿನಗಳ ಹಿಂದೆ ಪತ್ರಿಕೆಯಲ್ಲಿನ ಪಾವಗಡ ತಾಲೂಕಿನಲ್ಲಿ  ಕಳೆದ ಕೆಲವು ವರ್ಷಗಳಿಂದ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರದ ಕತೆ ಕೇಳಿ ದಿಗ್ಭ್ರಮೆಗೊಂಡೆ.  ಅಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಅಪಹರಿಸಿಕೊoಡು ಹೋಗಿ ವಾರಗಳ ತನಕ ಅತ್ಯಾಚಾರಗೈದು ಪುನಃ ವಾಪಸ್ ಅಲ್ಲಿಗೇ ತಂದು ಬಿಡುತ್ತಾರಂತೆ. ಅಲ್ಲಿ ಪೊಲೀಸ್ ಇಲಾಖೆ ಸತ್ತು ಮಲಗಿದೆಯಂತೆ. ಶ್ರೀದೇವಿ ಯಾ ಐಶ್ವರ್ಯಾ ರೈ ವಿಷಯಗಳಾಗಿದ್ದರೆ ಮಾಧ್ಯಮಗಳು ವಾರವಿಡೀ ಬಿತ್ತರಿಸುತ್ತಿದ್ದವು. ಆದರೆ ಬಡ ಹೆಣ್ಣು ಮಕ್ಕಳ ರೋದನ ಯಾರಿಗೂ ಬೇಡ. ನಿರ್ಭಯ ಹತ್ಯೆಯ ನಂತರ ಒಂದಿಸ್ಟೂ ದೇಶದಲ್ಲಿ ಮಹಿಳಾ ಪರ ಕಾಮುಕ ಪುರುಷ ವರ್ಗದಲ್ಲಿ ಬದಲಾವಣೆ ಆಗಬಹುದು ಯಾ ದೇಶದ ಕಾನೂನು ವ್ಯವಸ್ತೆಯಲ್ಲಿ ಬದಲಾವಣೆ ಬಂದು ಹೆಣ್ಣಿನ ಮೇಲಿನ ಅತ್ಯಾಚಾರ ಕಡಿಮೆ ಆಗಬಹುದು ಎಂದೇಣಿಸಿದರೆ ಅದು ಸುಳ್ಳಾಯಿತು. ಹೆಣ್ಣು ತೊಡುವ ಬಟ್ಟೆ ಬರೆಗಳೆ ಅತ್ಯಾಚಾರಗಳಿಗೆ ಕಾರಣ ಏಂಬ ಕಿಡಿಗೇಡಿ ಹೇಳಿಕೆ ಕೊಟ್ಟು ಕೆಲವು ಪುರುಷರು ತಮ್ಮ ಬುದ್ದಿ ಮಟ್ಟ ಯಾವ ಲೆವೆಲ್ ಏಂಬುದನ್ನು ದೇಶಕ್ಕೆ ತೊರಿಸಿಕೊಟ್ಟರು.

ಅತೀ ದೀರ್ಘಅವಧಿಯ  ಪ್ರಜಾಸತ್ತೆಯನ್ನು ನಡೆಸಿಕೊoಡು ಬರುತ್ತಿರುವ ಅಮೆರಿಕದಲ್ಲಿ ಸಹ ಇಂದಿಗೂ ಮಹಿಳೆ ರಾಸ್ಟ್ರಾಧ್ಯಕ್ಶರ ಪದವಿಗೆ ಏರಿಲ್ಲ. ಎಲ್ಲವೂ ಬಿಡಿ ನಮ್ಮ ಮುoಬೈ ನಲ್ಲಿ ಅನೇಕ ಕನ್ನಡ ಜಾತಿ ಸಂಘಟನೆಗಳಿವೆ. ಐವತ್ತು ನೂರು ವರ್ಷಗಳ ಇತಿಹಾಸದಲ್ಲಿ ಇಂದಿಗೂ ಮಹಿಳಾ ಅಧ್ಯಕ್ಷರನ್ನು ಕಂಡಿಲ್ಲ. ಎಲ್ಲರೂ ವಿಶ್ವ ಮಹಿಳಾ ದಿನ ಸಮಾನತೆಯ ಮಾತನ್ನು ಆಡುತ್ತಾರೆ. ಆದರೆ ಪುರುಷ ವರ್ಗ ಅಧ್ಯಕ್ಷಗಿರಿ ಮಹಿಳಾ ವರ್ಗಕ್ಕೇ ಬಿಟ್ಟುಕೊಡಲು ತಯಾರಿಲ್ಲ. ಇನ್ನು ಮಹಿಳೆಯಾರೇ ಸಮಾನತೆಯನ್ನು  ಎನ್ನುವುದು ನಾವು ತೊಡುವ ಬಟ್ಟೆಗಳಲ್ಲಿ, ನಾವು ಮಾಡುವ ಕೆಲಸಗಳಲ್ಲಿ , ನಾವು ಹಾಕಿಕೊಳ್ಳುವ ಟ್ಯಾಟೋಗಳಲ್ಲಿ, ನಾವು ಆಚರಿಸುವ ಲೇಟ್ ಪಾರ್ಟಿಗಳಲ್ಲಿ , ಕುಡಿಯುವುದು, ಸಿಗರೇಟ್ ಸೇದುವುದರಲ್ಲಿ ಖಂಡಿತಾ ಅಲ್ಲ. 

ಎಸ್ಟೋ ಹೆಣ್ಣು ಮಕ್ಕಳಿಗೆ ಶಾಲೆಯ ಮೆಟ್ಟಿಲು ತುಳಿಯಲು ಸಾಧ್ಯವಿರುವುದಿಲ್ಲ, ಸಾoಪ್ರಾದಾಯಿಕ ಮನೆತನದ ಎಸ್ಟೋ ಹೆಣ್ಣು ಮಕ್ಕಳು ಮನೆ ಯಿಂದ ಹೊರಬರುವಂತಿಲ್ಲ, ಎಸ್ಟೋ ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತ ಕಾರಣ ಹೆಣ್ಣು ಅಬಲೆ, ಹೀಗೆ ಹೆಣ್ಣನ್ನು ಮನ ಬಂದಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ನಿಮಗೆ ಬೇಕಾಗಿರುವ ಸಮಾನತೆ ಯಾವುದೆಂದು ಮೊದಲು ಗುರುತಿಸಿಕೊಳ್ಳಿರಿ. ನಿಮಗೆ ಬೇಕಾದ ಸಮಾನತೆ ಸಿಕ್ಕಿದಾಗ ಮಾತ್ರ ಈ ವಿಶ್ವ ಮಹಿಳಾ ದಿನಾಚರಣೆ ಅರ್ಥಪೂರ್ಣವೆನಿಸುತ್ತದೆ. 

ಏನಂತೀರಿ

ಗಣೇಶ್ ಎಸ್ ಬ್ರಹ್ಮಾವರ್
9594228684

 


Share