ಬಡ ದೇವಾಡಿಗರ ಆಶಾಕಿರಣ ದೇವಾಡಿಗ ಅಕ್ಷಯ ಕಿರಣ.....

 

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾದ ರೀತೀಯಲ್ಲೀ ಹೀಗೂ ಬಳಸಿಕೊಳ್ಳಬಹುದು ಎನ್ನುವುದಕ್ಕೇ ದೇವಾಡಿಗ ಅಕ್ಷಯ ಕಿರಣ ಎನ್ನುವ ವ್ಹಾಟ್ಸ್ ಆಪ್ ಗ್ರೂಪ್ ಮಾದರಿಯಾಗಿದೇ. ವ್ಯವಸ್ಥೇ ಅನ್ನುವುದು ನಿಂತ ನೀರಾಗಬಾರದು. ಬದಲಾವಣೇ  ಜಗದ ನಿಯಮ. ಕೇಲವರು ಇತಿಹಾಸದಲ್ಲಿ ಹೂತು ಹೋಗುತ್ತಾರೇ. ಮತ್ತೇ ಕೇಲವರು ಇತಿಹಾಸ ನಿರ್ಮಿಸುತ್ತಾರೇ. ಹುಟ್ಟು ಆಕಸ್ಮಿಕ , ಸಾವು ನಿಶ್ಚಿತ. ನಾವೇಸ್ಟು ಕಾಲ ಬದುಕಿದ್ದೇವೇ ಅನ್ನುವುದಕ್ಕಿಂತ ಬದುಕಿದ ಅವಧಿಯಲ್ಲಿ ಏನು ಸಾಧಿಸಿದೇವು ಎನ್ನುವುದು ಮುಖ್ಯ. ನಾವು ಬದುಕ್ಕೂತ ಇನ್ನೊಬ್ಬರ ಕಸ್ಟಗಳಿಗೇ ಸ್ಪಂದಿಸುವುದೇ *ದೇವಾಡಿಗ ಅಕ್ಷಯ ಕಿರಣ*ದ ಮೂಲ ಮಂತ್ರವಾಗಿದೇ.

ಈ ವ್ಹಾಟ್ಸ್ ಆಪ್ ಜಾಲತಾಣವನ್ನು ಬರೇ ಶುಭೋದಯ , ಶುಭರಾತ್ರಿ, ಕೇಲಸಕ್ಕೇ ಬಾರದ ವೀಡಿಯೋಗಳನ್ನು ಶ್ಯಾರ್ ಮಾಡುತ್ತಾ ಕಾಲ ಸಮಯ ವ್ಯರ್ಥ ಮಾಡುವ ಬದಲು ಏನಾದರೂ ಇದರ ಮೂಲಕ ಸಮಾಜಮುಖಿ ಕೇಲಸ ಮಾಡಬೇಕೇನ್ನುವ ಚಿಂತನೇಯ  ಪರಿಣಾಮವೇ ದೇವಾಡಿಗ ಅಕ್ಷಯ ಕಿರಣ ವ್ಹಾಟ್ಸ್ ಆಪ್ ಬಳಗ ದ ಉದಯಕ್ಕೇ ಕಾರಣ. ನಾವು ಹುಟ್ಟಿದ ಈ  ಸಮಾಜಕ್ಕೇ ಒಳ್ಳೇಯದನ್ನು ಮಾಡಲು ಪ್ರಯತ್ನಿಸೋಣ ಎನ್ನುವ ಹ್ರದಯವಂತಿಕೇಯ ಕೇಲವು  ಸಮಾನ ಮನಸ್ಕ ದೇವಾಡಿಗರು  ಸೇರಿ   ನಮ್ಮ ಸಮಾಜದ ದೀನರಿಗೇ , ರೋಗ ಪೀಡಿತರಿಗೇ , ಇನ್ನಿತರ ಸಂಕಸ್ಟಗಳನ್ನು ಎದುರಿಸುತ್ತಿರುವವರಿಗೇ  ನೇರವು ನೀಡಲು ಪಣ ತೊಟ್ಟಿದ್ದಾರೇ.ಅದಕ್ಕೇ ಸೇತುವೇ ಯಾದದ್ದು ದೇವಾಡಿಗ ಅಕ್ಷಯ ಕಿರಣ  ಅನ್ನುವ ವ್ಹಾಟ್ಸ್ ಆಪ್ ಗ್ರೂಪ್.

ಮೊನ್ನೇ ಭಾನುವಾರ ತಾ 27 ರಂದು ಕುಂದಾಪುರ ತಾಲೂಕಿನ ತೇಕ್ಕಟೇಯ ನಿವಾಸಿ  ದೇವಾಡಿಗ ಸಮುದಾಯದ ಪಾರ್ಶ್ವ ವಾಯು ಪೀಡಿತ ಆನಂದ ದೇವಾಡಿಗರ ಮನೆಗೆ ಭೇಟಿ ನೀಡಿ ರೂ 15,000/ ವೈದ್ಯಕೀಯ ನೇರವು ನೀಡಿದರು.

ಇತ್ತೀಚೇಗೇ ರಾತ್ರಿ ವೇಳೇ ಮನೇಗೇ ತೇರಳುತ್ತಿದ್ದ ಸಂಧರ್ಭದಲ್ಲಿ ಗಾಳಿ ಮಳೇಯ ಕಾರಣ ರಸ್ತೇ ಪಕ್ಕದಲ್ಲಿ ಇದ್ದ ಮರ ಬಿದ್ದು ದ್ವಿಚಕ್ರ ವಾಹನ ನಡೇಸುತ್ತಿದ್ದ ಕುಂದಾಪುರ ವಕ್ವಾಡಿ ನಿವಾಸಿ 27 ವರ್ಷದ ರವಿ ದೇವಾಡಿಗ ಅಕಾಲಿಕ ಮರಣಕ್ಕಿಡಾಗಿದ್ದ ದುಖಃ ತಪ್ತ ಬಡ ಕುಟುಂಬಕ್ಕೇ ಭಾನುವಾರ ಬಳಗದ ಸದಸ್ಯರು ಸೌಜನ್ಯದ ಭೇಟಿ ನೀಡಿ ರೂ 15,000/- ಆರ್ಥಿಕ ಸಹಾಯ ನೀಡಿದರು. ಕಳೇದ ತಿಂಗಳು ಬೈಂದೂರು ವ್ಯಾಪ್ತಿಯ ಬಿಜೂರ್ ನಿವಾಸಿ ದೇವರಾಜ್ ದೇವಾಡಿಗ ಎನ್ನುವ  ಕೂಲಿ ಕಾರ್ಮಿಕ ಬ್ರೈನ್ ಹ್ಯಾಮ್ರೇಜ್ ಒಳಗಾದಾಗ ತಕ್ಷಣ ಅವರ ಮನೇಗೇ ಭೇಟಿ ನೀಡಿ  ಅವರಿಗೇ ಸಾಂತ್ವಾನ ಹೇಳಿ ರೂ 25,000/-ವೈದ್ಯಕೀಯ ನೇರವನ್ನು ನೀಡಿದ್ದಾರೇ.  

ಇದಕ್ಕೂ ಮೊದಲು ಹೇಳಬೇಕೆಂದರೆ ಇದರ ಸದಸ್ಯರು ಮಾಹಾರಾಸ್ಟ್ರ ತಾಣ ಲಿವರ್ ಇಂಜುರಿ ಕೇಸ್ , ಮುದರಂಗಡಿ ಕಿಡ್ನಿ ಸಮಸ್ಯೇ ಪೀಡಿತ ಮಹಿಳೇ ಕೇಸ್, ಬೇಂಗಳೂರಿನ ಕ್ಯಾನ್ಸರ್ ಪೀಡಿತೇ ಮಹಿಳೇ ಕೇಸ್, ಬ್ರಹ್ಮಾವರದ ಡೇವಡಿಗರೋರ್ವರ ಓಪನ್ ಹಾರ್ಟ್ ಸರ್ಜರಿ ಕೇಸ್ ಹೀಗೇ ವೈದ್ಯಕೀಯ  ನೇರವು ದೊರಕಿಸಿಕೊಟ್ಟ ಪಟ್ಟಿ ಬೇಳೇಯುತ್ತಲೇ ಹೋಗುತ್ತದೇ.

ಸೇವಾಭಾವನೇ ಒಂದೇ ಈ ಬಳಗದ ಒಗ್ಗಟ್ಟಿನ ಸೂತ್ರ. ಮಂಗಳೂರಿಂದ ಮುಂಬೈ ತನಕ,  ಬೈಂದೂರಿನಿಂದ ಗಲ್ಫ್ ದೇಶ ಬಹರೈನ್ ತನಕದ ದೇವಾಡಿಗರು ಈ ಬಳಗದಲ್ಲಿರುವುದು ವಿಶೇಷತೇ. 

ಈ ಬಳಗಕ್ಕೇ ವೈದ್ಯಕೀಯ ನೇರವಿನ ಮನವಿ ಬಂದ ತಕ್ಷಣ ಆಯಾ ಊರಿನ ವ್ಯಾಪ್ತಿಯ ಬಳಗದ ಸೇವಾದಾರರು ಅಲ್ಲಿನ ಮನವಿ ಕೊಟ್ಟವರ ಮನೇ ಯಾ  ಆಸ್ಪತ್ರೇಗೇ ಭೇಟಿ ನೀಡಿ ಸಂಬoದಿಸಿದ  ಸೇವಾದಾರರಿಗೇ ಸಂಪೂರ್ಣ ವಿವರವನ್ನು ಕಳುಹಿಸಿಕೊಡುತ್ತಾರೇ. ತದನಂತರ ಆವರವರ ಸಾಮರ್ಥ್ಯಕ್ಕನುಗುಣವಾಗಿ ಬಳಗದ ಸದಸ್ಯರು ಹಣ ಸೇರಿಸಿ  ವೈದ್ಯಕೀಯ ನೇರವನ್ನು ನೀಡುತ್ತಾರೇ. ಇದರ ಸದಸ್ಯರು ತಮ್ಮ ಹುಟ್ಟಿದ ಹಬ್ಬ ಮತ್ತು ಮದುವೇ ವಾರ್ಷಿಕೋತ್ಸವದ ದಿನ ಆಚರಣೇಯ ಒಂದಸ್ಟು ಅಂಶವನ್ನು ವೈದ್ಯಕೀಯ ಸಹಾಯಧನವಾಗಿ ನೀಡಿ ತಮ್ಮ ಆಚರಣೇಯನ್ನು ವಿಶೇಷವಾಗಿ ಆಚರಿಸಿ ಇತರರಿಗೇ ಮಾದರಿಯಾಗಿರುವುದು ವಿಶೇಷ.   

ಗಿಡವಾಗಿ ಬೇಳೇದು ಬಡವರಿಗೇ ನೇರವಾಗುತ್ತೀರುವ ದೇವಾಡಿಗ ಅಕ್ಷಯ ಕಿರಣ ವಾಟ್ಸ್ ಅಪ್ ಬಳಗ ಮುಂದಿನ ದಿನಗಳಲ್ಲಿ ಹೇಮ್ಮರವಾಗಿ ಬೇಳೇದು ಎಲ್ಲರಿಗೂ ಸ್ಪಂದಿಸಲಿ ಎಂದು ಹಾರೈಸುತ್ತೇವೇ..

 

~ ಗಣೇಶ ಶೇರಿಗಾರ್, ಬ್ರಹ್ಮಾವರ - ಮುಂಬೈ


Share