ವಿಧ್ಯಾರ್ಥಿವೇತನ ವಿತರಣೆಯ ಸುತ್ತ ಒಂದು ನೋಟ . . . . . .

 

ಭಂದುಗಳೇ ; 
ಶಾಲಾ ಕಾಲೇಜುಗಳು ಪುನಾರಂಭಗೊಂಡಿದೆ. ಮಕ್ಕಳು ನವ ಉತ್ಸಾಹದ ಜತೇ ವಿದ್ಯಾ ದೇಗುಲದತ್ತ ಹೆಜ್ಜೆ ಹಾಕುತಿದ್ದಾರೆ. ಅಲ್ಲವೇ?

ನಾನು ಹೇಳ ಹೊರಟಿರುವುದು ಸಂಘ ಸಂಸ್ಥೆಗಳ ಸ್ಕಾಲರಶಿಪ್  ಕೊಡುವ ಬಗ್ಗೇ ಅರ್ಜಿ ಆಹ್ವಾನಗಳ ಭರಾಟೆ. ಎಲ್ಲೋ ಒಂದುಕಡೇ ವಿದ್ಯಾರ್ಥಿ ವೇತನದ ಮುತುವರ್ಜಿಕ್ಕಿಂತ ಪ್ರತಿಸ್ಟೇಯೇ ಮುಖ್ಯ ವೇದೀಕಾ  ಕಣವಾಗಿ ತೋರಿದಂತೇ ಭಾಸವಾಗುತ್ತಿದೇ. ನನ್ನ ಅನಿಸಿಕೇ ತಪ್ಪಾಗಿ ತಿಳಿಯದಿರಿ.  ಏಕೇಂದರೇ ವಿಧ್ಯಾರ್ಥಿವಿತರಣೇಯ ನಂತರ ನಾವು ಇಸ್ಟು ಲಕ್ಷ ವಿತರಿಸಿದ್ದೇವೇ ಅಸ್ಟು ಲಕ್ಷ ವಿತರಿಸಿದ್ದೇವೇ ಅಂತ ಜಂಬದ ಹೇಳಿಕೇ ಗಳನ್ನು ಕೊಡುವಾಗ ನಿಜವಾಗಿಯೂ ಆ ಹಂಚಿದ ವಿದ್ಯಾರ್ಥಿ ವೇತನ ಪ್ರತ್ಯೇಕ ವಿಧ್ಯಾರ್ಥಿಯ ವಯಕ್ತಿಕ ವಿದ್ಯಾರ್ಥಿ ಜೀವನಕ್ಕೇ ಎಸ್ಟು ಸಹಕಾರಿಯಾಯಿತು ಎನ್ನುವುದನ್ನು ನಾವು ನೋಡಬೇಕು.

ನಾನು ಹೇಳ ಹೊರಟಿರುವುದು ಇಂದು ವಿದ್ಯೇ ಅನ್ನುವುದು ಸಂಪೂರ್ಣವಾಗಿ ವ್ಯಾಪಾರ ವ್ಯವಹಾರವಾಗಿ ಬದಲಾಗಿದೇ. ಮದ್ಯಮ ಕೇಳ ವರ್ಗದ ಮಕ್ಕಳಿಗೇ ಉನ್ನತ  ಉತ್ತಮ ಗುಣ ಮಟ್ಟದ ವಿದ್ಯಾಭ್ಯಾಸ ಗಗನ ಕುಸುಮ ವಾಗಿದೇ. ಮೆರಿಟ್ ಬಂದವರಿಗೆ ಸರಕಾರದ ಕೇಲವು ಏನ್ ಜಿ ಓ ಗಳ ಸಹಾಯ ಸಿಗುತ್ತದೇ. ಆದರೇ ಬಡ 50% ಅಂಕ ಪಡೇದ ಮಕ್ಕಳ ಗತಿ ? ಎಲ್ಲರೂ ಸರಿ ಸಮಾನರಲ್ಲ.  ಅಂತೇಯೇ ಎಲ್ಲ ಮಕ್ಕಳಲ್ಲೂ ಮೇರಿಟ್ ಅಂಕಗಳನ್ನು ಒಂದೇ ರೀತಿ  ನಾವು ಆಪೇಕ್ಷೇ ಇಟ್ಟುಕೊಳ್ಳುವಂತಿಲ್ಲ. ಅವರವರ ಬುದ್ದಿ ಮತ್ತೇ ಅವರಿಗೇ ತಕ್ಕಂತೇ. ಎಸ್ಟು ಪರಿಶ್ರಮ ಕೊಟ್ಟರೂ ಅವರು ಮೇಲಕ್ಕೂ ಏರದೇ ಕೇಳಕ್ಕೂ ಇಳಿಯದೇ ಮದ್ಯದಲ್ಲಿ ಇರುತ್ತಾರೇ. ಆದರೇ ಸರಕಾರಿ ಸವಲತ್ತುಗಳಿಂದ ವಂಚಿತರಾಗುತ್ತಾರೆ.

ಒಂದು ಸಂಬಂದಪಟ್ಟ ಸಂಘಟನೆಯ  ವಿದ್ಯಾರ್ಥಿವೇತನದ ಸಮಾರಂಭದ ಒಟ್ಟು ವ್ಯಯವಾಗುವ ನಾಲ್ಕೈದು ಲಕ್ಷ ರೂಪಾಯಿನಲ್ಲಿ ಕನಿಸ್ಟ 20 ರಿಂದ 25 ಕ್ಕೂ ಮಿಕ್ಕಿ ಬಡ ವಿಧ್ಯಾರ್ಥಿಗಳ ಶಾಲೇಯ ವಾರ್ಷಿಕ ಸಂಪೂರ್ಣ ಶಾಲಾ ಶುಲ್ಕವನ್ನು ಭರಿಸಿದರೇ ಆ ಬಡ ವಿಧ್ಯಾರ್ಥಿಗಳ ಶಿಕ್ಷಣ ಜೀವನದ ದಿಕ್ಕೇ ಬದಲಾಯಿಸಬಹುದು. ಆದರೇ ಅಷ್ಟೇ ಹಣ 200 ಯಾ 300 ವಿಧ್ಯಾರ್ಥಿಗಳಿಗೇ ರು 1500 ಯಾ 2000 ರೂನಂತೇ ಹಂಚಿದರೇ ಆ ವಿಧ್ಯಾರ್ಥಿಗಳ ಶಿಕ್ಷಣ ಜೀವನಕ್ರಮದಲ್ಲಿ ಯಾವ ಪರಿಣಾಮವೂ ಬೀರದು ಎಂದು ಸಂಬಂದಿಸಿದ ವ್ಯವಸ್ಥಾಪಕರು ಅರ್ಥೈಸಿಕೊಂಡರೇ ಸಂಘ ಸಂಸ್ಥೇಗಳ ಕಾರ್ಯವೈಖರಿಯಲ್ಲಿ ಬದಲಾವಣೇ ತಂದಲ್ಲಿ ಅದೊಂದು ವಿಧ್ಯಾರ್ಥಿ ವೇತನ ಪ್ರಕ್ರಿಯೇಯಲ್ಲಿ  ಕ್ರಾಂತಿಯೇ ಆಗಬಹುದು.

ನಾನು ಈ ಹಿಂದೇ ಹೇಳಿದಂತೇ ವ್ಯವಸ್ಥೇ ಎನ್ನುವುದು ನಿಂತ ನೀರಾಗಬಾರದು. ಅಜ್ಜ ನೇಟ್ಟ ಆಲದ ಮರಕ್ಕೇ ಸುತ್ತು ಹೊಡೇಯುವ ಪುರಾತನ ಶೈಲಿ ಬಿಟ್ಟು ಹೊಸ ಬದಲಾವಣೇಯ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಹೊಸ ಫಲಿತಾಂಶವನ್ನು ನಿರೀಕ್ಷಿಸಬಹುದು. ಕೇಲವೊಂದು ಭಾಷಣಕಾರರು ಇನ್ನು ಐದು ವರ್ಷಗಳಲ್ಲಿ  ಹತ್ತು ವರ್ಷಗಳಲ್ಲಿ ನಮ್ಮ ಸಮಾಜ ಸಂಪೂರ್ಣ ಸಾಕ್ಷರತೇಯನ್ನು ಪಡೇಯಬೇಕು ಅಂತ ಚಪ್ಪಾಳೇಯ ನಡುವೇ  ಘೋಷಿಸುತ್ತಾರೇ ಆದರೇ ಅದಕ್ಕೇ ಪೂರಕವಾದ ವ್ಯವಸ್ತಾ ವಾತಾವರಣ  ನಿರ್ಮಿಸದೇ ಬರೇ ಒಣ ಭಾಷಣಗಳಿಗೇ ಸೀಮಿತವಾದರೇ ಏನು ಪ್ರಯೋಜನ ?  ಸಂಘ ಸಂಸ್ಥೇಗಳು ಅವುಗಳ ಹುಟ್ಟಿನ ಮೂಲ ಉದ್ದೇಶಗಳನ್ನು ಖಂಡಿತಾ ಮರೇಯಬಾರದು. ವ್ಯಕ್ತಿ ಪ್ರತಿ ಸ್ಟೇಟಸ್ ಗಿಂತ ಸಂಸ್ಥೇಯ ಪ್ರತ್  ಟಿಸ್ಟೇಯೇ ಯಾವತ್ತೂ ಮೇಲಿರಬೇಕು. ಸಮಾಜದ ತಳ ಮಟ್ಟದ ಸಮಸ್ಯೇಗಳಿಗೇ ಯಾವಾಗಲೂ ಪೂರಕವಾಗಿ ಸ್ಪಂದಿಸಬೇಕು. ಎಲ್ಲವೂ ಕಾಲಕ್ಕೇ ತಕ್ಕಂತೇ ಹಂತ ಹಂತವಾಗಿ ಬದಲಾಗಾದಲೇ ನೋಡಲು ಹಾಗು ಕೇಳಲು ಚಂದ.

ಇತ್ತೀಚಿನ ವರ್ಷಗಳಲ್ಲಿ ಸಮಾಜದ ಸ್ಥಿತಿವಂತ ಉದ್ಯಮಿಗಳು ದೇವಸ್ಥಾನ ನಿರ್ಮಾಣ, ಜೀರ್ಣೋದ್ಧಾರಗಳಿಗೇ ಲಕ್ಷಾಂತರ ರೂಪಾಯಿ ದೇಣಿಗೇ ನೀಡುತ್ತಾರೇ ಆದರೇ ಅದರ 20% ಹಣವನ್ನು  ಸಮಾಜದ ಬಡ ವಿಧ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಿದ್ದರೇ ಚಾರಿತ್ರಿಕ  ಸಾಮಾಜಿಕ ಪರಿವರ್ತನೇಯಾಗುತಿತ್ತು.  ನನ್ನನ್ನು ದೇವಾಲಯಗಳ ಜೀರ್ಣೋದ್ಧಾರದ ವೀರೋಧಕನೆಂದು ಬಿಂಬಿಸಬೇಡಿ. ಧಾರ್ಮಿಕ ಚಿಂತನೇಯ ಜತೇ ಸಾಮಾಜಿಕ ಚಿಂತನೇಯೂ ಜೊತೇ ಜೊತೇ ಯಾಗಿ ಮೇಳೈಸಿದ್ದರೇ ಸಮಾಜದ ಅಭಿವೃದ್ಧಿಗೇ ಪೂರಕವಾಗಿರುತಿತ್ತು.    

ಎರಡು ವರ್ಷಗಳ ಹಿಂದೇ ಮಹಿಳೇಯೊಬ್ಬರ  ಗಂಡ  ಅಕಸ್ಮಾತ್ ತೀರಿಕೋಂಡಾಗ ಆವರ  ಮಕ್ಕಳ ವಿದ್ಯಾಭಾಸ ನಿಲ್ಲುವ  ಹಂತದಲ್ಲೀದ್ದಾಗ ಉದ್ಯಮಿಯೊಬ್ಬರು ಅವಳ ಎರಡು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಪಿ ಯು ಸಿ ತೇರ್ರ್ಗಡೇಯಾದ ಹುಡುಗನ ತಂದೇ ಕಿಡ್ನಿ ಫೈಲ್ಯೂರ್ ಆಗಿ ಪದವಿ ಪೂರೈಸಲು ಸಾಧ್ಯವಿಲ್ಲ ಎಂದಾಗ ಮತ್ತೊಬ್ಬ ಉದ್ಯಮಿಯೊಬ್ಬರು ಆ ಹುಡುಗನ ಮೂರು ವರ್ಷದ ಪದವಿ ವ್ಯಾಸಂಗದ ಜವಾಬ್ದಾರಿ ತೇಗೇದುಕೊಂಡಿದ್ದರು . ಅಲ್ಲೊಂದು ಇಲ್ಲೊಂದು ಅಪರೂಪದ ಸುದ್ದಿ ಸಿಗುತ್ತದೇ . ಅಲ್ಲದೇ ನನ್ನ ಆತ್ಮೀಯರೊಬ್ಬರು ವಾರದ ಹಿಂದೇ ಫೋನ್ ಮಾಡಿ ಎಂಟು ಹತ್ತು ಕಡು ಬಡ ಮಾಕ್ಕಳ ವಿಧ್ಯಾಭ್ಯಾಸದ ದತ್ತು ತೇಗೇದುಕೊಳ್ಳುವ ಬಗ್ಗೇ ಇಂಗಿತ ವ್ಯಕ್ತಪಡಿಸಿದ್ದರು.  ಅಂತಹ ಉದ್ಯಮಿಯಂತೇ ಹೆಚ್ಚು ಹೆಚ್ಚು ಉದ್ಯಮಿಗಳು ಮುಂದೇ ಬರುವಂತಾಗಲಿ. ಶೈಕ್ಷಣಿಕ ಸಹಾಯ ನೀಡುವ ಉದ್ಯಮಿಗಳ ಹೇಸರು ಬಡ ವಿಧ್ಯಾರ್ಥಿಗಳ ಅಮ್ರತ ಶಿಲೆಯೆಂಬ ಮಸ್ತಿಷ್ಕದಲ್ಲಿ ಅಚ್ಚೊತ್ತಿ ಮುದ್ರಿತವಾಗುವುದು. 

ವಿದ್ಯಾರ್ಥಿ ವೇತನ ಪ್ರಕ್ರಿಯೇಯಲ್ಲಿ ಸಂಘ ಸಂಸ್ಥೇಗಳ ಆರ್ಥಿಕ ಸಂಪನ್ಮೂಲಕ್ಕೇ ತಕ್ಕ ಹಾಗೇ ಬಡ ವಿಧ್ಯಾರ್ಥಿಗಳನ್ನು ದತ್ತು ತೇಗೇದುಕೊಳ್ಳುವಂತಾಗಬೇಕು.  ಡಾ! ರಾಜ್ ಕುಮಾರ್ ರ  ಹಾಡು ನೀವು ಕೇಳಿರಬಹುದು. *ಮುತ್ತಿನಂತ ಮಾತೊಂದು ಗೊತ್ತೇನಮ್ಮ , ನಾವು ಕಾಲಕ್ಕೇ ತಕ್ಕಂತೇ ನಡೇಯಬೇಕು ಎಂದು  ತಾಳಕ್ಕೇ ತಕ್ಕಂತೇ ಕುಣಿಯಬೇಕು*  ಹಾಗಿಲ್ಲವಾದಲ್ಲೀ ಸಮಾಜಕ್ಕೇ ಅದು ವಿರೋಧಾಭಾಸವಾಗಿ ಕಂಡರೇ ಆಶ್ಚರ್ಯಪಡಬೇಕಿಲ್ಲ. 
ಏನಂತೀರಿ ? 


 

 

 

 

 

 

 

 

~ಗಣೇಶ್ ಎಸ್ ಬ್ರಹ್ಮಾವರ್
ನವೀ ಮುಂಬೈ ; ಟೆಲಿ ನಂ. 9594228684


Share