’ದೇವಾಡಿಗ ಸಮಾಜಕ್ಕೂ ಸವಿತಾ ಸಮಾಜಕ್ಕೂ ಯಾವುದೇ ಸಂಬದ್ಧವೂ ಇಲ್ಲ ’

 

ವಿಷಯ : ದೇವಾಡಿಗ ಜಾತಿಯ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಹೇಳಿಕೆಯ ಸ್ಪಷ್ಟೀಕರಣ.

ಪ್ರೀತಿಯ ಮಾಧ್ಯಮದ ಮಿತ್ರರೇ.,
ದೇವಾಡಿಗ ಜಾತಿ ಎನ್ನುವುದು ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿರುವ ಒಂದು ಬಹುಸಂಖ್ಯಾತ ಸಮುದಾಯ. ಈ ಭಾಗವನ್ನು ಹೊರತುಪಡಿಸಿ ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕಾಗಿ ಸಮುದಾಯದ ಜನರು ದೇಶದ ವಿವಿಧ ಪ್ರದೇಶದಲ್ಲಿ ವಾಸವಾಗಿದ್ದಾರೆ. ಶೇರಿಗಾರ್/ ಸೇರಿಗಾರ್, ಮೊಯ್ಲಿ ಎನ್ನುವುದು ಮಾತ್ರ ದೇವಾಡಿಗರ ಉಪಜಾತಿಗಳಾಗಿರುತ್ತದೆ. ಇದನ್ನು ಹೊರತುಪಡಿಸಿ ದೇವಾಡಿಗ ಸಮುದಾಯಕ್ಕೆ ಯಾವುದೇ ಉಪಜಾತಿಗಳು ಇರುವುದಿಲ್ಲ.

ದಿನಾಂಕ 14/08/2018 ರಂದು ನಿಮ್ಮ ಪತ್ರಿಕೆಯ ಮೆಟ್ರೋ ಪುರವಣಿಯಲ್ಲಿ ಪ್ರಕಟವಾದ "ಇದು ವಾಲಗದವರ ಓಲಗ" ಎಂಬ ಅಂಕಣದಲ್ಲಿ ಶ್ರೀ ಮುನಿನಾರಯಣಪ್ಪನವರು ದೇವಾಡಿಗ ಸಮುದಾಯದವರನ್ನು ಸವಿತಾ ಸಮಾಜದ ಇತರ ಉಪಜಾತಿ ಗಳೊಂದಿಗೆ ಸೇರಿಸಿ ಹೇಳಿಕೆ ನೀಡಿರುವುದು ಖಂಡನಿಯ ಹಾಗೂ ಇದರಿಂದ ನಮ್ಮ ದೇವಾಡಿಗ ಸಮುದಾಯಕ್ಕೆ ಅಪಾರ ನೋವಾಗಿದೆ. ದೇವಾಡಿಗ ಸಮುದಾಯದ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ವಿನಾಕಾರಣ ತಪ್ಪು ಹೇಳಿಕೆಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. 

ನಾವು ಈ ಮೂಲಕ ಸ್ಪಷ್ಟೀಕರಿಸುದೇನೆಂದರೆ ದೇವಾಡಿಗ ಸಮುದಾಯಕ್ಕೂ , ಸವಿತಾ ಸಮಾಜಕ್ಕೂ ಯಾವ ಸಂಬಂಧವಿರುದಿಲ್ಲ. ಶ್ರೀ ಮುನಿನಾರಯಣಪ್ಪ (9343715821) ಮತ್ತು ಶ್ರೀ ಮುತ್ತುರಾಜ್ (9845094846) ರವರ ಹೇಳಿಕೆ ಅರ್ಥಹೀನ ಮತ್ತು ಅಸಂಬದ್ಧವಾಗಿದ್ದು ಇದನ್ನು ದೇವಾಡಿಗ ಸಮುದಾಯ ಉಗ್ರವಾಗಿ ಖಂಡಿಸುತ್ತದೆ.

ದಯಮಾಡಿ ಇದರ ಬಗ್ಗೆ ತಮ್ಮ ಪತ್ರಿಕೆಯಲ್ಲಿ ತಪ್ಪನ್ನು ತಿದ್ದಿ ಸರಿಯಾದ ಸ್ಪಷ್ಟೀಕರಣ ಪ್ರಕಟಿಸಬೇಕಾಗಿ ದೇವಾಡಿಗ ಸಮುದಾಯದ ಪರವಾಗಿ ಆಗ್ರಹಿಸುತಿದ್ದೇವೆ.

~ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಸಂಘದ ಸರ್ವ ಸದಸ್ಯರು.


Share