ಉಡುಪಿ ಕೃಷ್ಣ ಮಠದ ಆಸ್ಥಾನ ವಿದ್ವಾನ ಸಾಕ್ಸೋಪೋನ್ ಮಾಂತ್ರಿಕ ಸೂರ್ಯ ಶೇರಿಗಾರ್

ಹಿರಿಯಡ್ಕ: ಸಂಗೀತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಸಲ್ಲಿಸಿದ ಸಾಕ್ಸೋಫೋನ್ ಗುರು ಶ್ರೀ ಸೂರ್ಯ ಶೇರಿಗಾರ್ ರವರು ಇತ್ತೀಚೆಗೆ ನಿಧನರಾದರು.

ತಾ. 30-6-1941 ರಲ್ಲಿ ಜನಿಸಿದ ಶ್ರೀ. ಬಿ.ಎಸ್.ಸೂರ್ಯ ಶೇರಿಗಾರ್ ರವರು ಉಡುಪಿಯಲ್ಲಿ ಸಾಕ್ಸೋಫೋನ್ ವಾದಕರಾಗಿ ಬಹಳ ಖ್ಯಾತಿಯನ್ನು ಪಡೆದು ಅಪಾರ ಶಿಷ್ಯರನ್ನು ಹೊಂದಿದ್ದರು. ಶ್ರೀ ಕೃಷ್ಣ ಮಠದ ಆಸ್ಥಾನ ವಿಧ್ವಾನ್ ರಾಗಿ 30 ವರ್ಷ ನಿರಂತರ ಸೇವೆ ಸಲ್ಲಿಸಿದ್ದರು.

ಶ್ರೀಯುತರು ಪ್ರಖ್ಯಾತ ಸಾಕ್ಸಾಫೋನ್ ವಾದಕ ಮಾನ್ಯ ಕದ್ರಿ ಗೋಪಾಲ್ ನಾಥ್ ರವರಿಂದು ಗೌರವ ಪುರಸ್ಕಾರವನ್ನು ಪಡೆದಿರುತ್ತಾರೆ.

ಹಿರಿಯಡ್ಕದಲ್ಲಿ 50 ವರ್ಷದಿಂದ ವಾಸವಾಗಿವಗಿದ್ದ ಸೂರ್ಯ ಶೇರಿಗಾರು  ತಾ.4-09-2018 ರಂದು ದೈವಾಧೀನರಾದರು. ಅವರು ಪತ್ನಿ ಲಕ್ಷ್ಮಿ ಮತ್ತು 7 ಮಂದಿ ಮಕ್ಕಳು ಹಾಗೂ ಅಪಾರ ಬಂಧುಗಳು ಮತ್ತು ಶಿಷ್ಯವೃಂದವನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ-ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ.

 


Share