ದೇವಾಡಿಗ ಸಂಘ ಮತ್ತು ಇತರ ಸಂಸ್ಥೆಗಳಿಂದ ಜಂಟಿ ’ಉಚಿತ ಕಣ್ಣಿನ ತಪಾಸಣೆ " ಶಿಭಿರ

ಉಪ್ಪುಂದ: ಚಾರ್ಮಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆ ಕೋಟಾ,  ಲಯನ್ಸ್ ಟ್ರಸ್ಟ್ ಫಾರ್ ಸರ್ವಿಸಸ್ & ಚಾರಿಟೀಸ್(ರಿ.)ಕೋಟಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣಾ ವಿಭಾಗ ಉಡುಪಿ, ಜೆಸಿಐ ಬೈಂದೂರು ಸಿಟಿ, ದೇವಾಡಿಗರ ಒಕ್ಕೂಟ ಬೈಂದೂರು, ದೇವಾಡಿಗರ ಸಂಘ ಉಪ್ಪುಂದ, ಸುವಿಚಾರ ಬಳಗ ಉಪ್ಪುಂದ ಡಿ. ಡಿ. ಯು. ಜಿ. ಕೆ ವೈ ಕೇಂದ್ರ  ಬೈಂದೂರು;  ಧ್ವನಿ ಬೆಳಕು ಸಂಯೋಜಕರ ಸಂಘ ಬೈಂದೂರು ವಲಯ ಇವರ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಬೈಂದೂರು(NCD)ವಿಭಾಗ ಇವರಿಂದ;  

ಉಚಿತ ಮಧುಮೇಹ ಮತ್ತು ರಕ್ತದ ಒತ್ತಡ ಶಿಬಿರ ದಿನಾಂಕ 22/12/2018 ನೇ  ಶನಿವಾರ ಸಮಯ ಬೆಳಿಗ್ಗೆ ಗಂಟೆ 9:30 ರಿಂದ12:30 ರ ತನಕ...  

ಸ್ಥಳ:ಶಂಕರ ಕಲಾಮಂದಿರ ಉಪ್ಪುಂದ

ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.

1) ಶಿಬಿರದಲ್ಲಿ ಕಣ್ಣಿನ ತಪಾಸಣೆ ನೆಡೆಸಿ ಪೊರೆ ರೋಗ ಶಸ್ತ್ರ ಚಿಕಿತ್ಸೆಗೆ ಒಳಪಡುವ ರೋಗಿಗಳನ್ನು ಶಿಬಿರದ ದಿನದಂದೇ ಆಸ್ಪತ್ರೆಯ ವಾಹನದಲ್ಲಿ ಕರೆ ತಂದು ಮಂಗಳವಾರ ಬೆಳಿಗ್ಗೆ ವಾಪಸ್ಸು ಕಳುಹಿಸಿ ಕೊಡಲಾಗುವುದು.

2) ರಿಯಾಯಿತಿ ದರದಲ್ಲಿ ಕನ್ನಡಕದ ವ್ಯವಸ್ಥೆಯನ್ನು ಮಾಡಲಾಗುವುದು.

3) ಲೇಸರ್ ಚಿಕೆತ್ಸೆಯ ವೆಚ್ಚವನ್ನು  ರಿಯಾಯಿತಿ ಸೌಲಭ್ಯದಲ್ಲಿ ಕಲ್ಪಿಸಲಾಗುವುದು

4) ಗ್ಲಾಕೋಮಾ ಖಾಯಿಲೆಯನ್ನು ಆಧುನಿಕ ಹಮ್ ಪ್ರೀ ಫೀಲ್ಡ್ ಅನಾಲೈಸರ್ ಉಪಕರಣದಿಂದ ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಗುವುದು ತಪಾಸಣಾ ವೆಚ್ಚವನ್ನು ರಿಯಾಯಿತಿ ಸೌಲಭ್ಯದಲ್ಲಿ ಕಲ್ಪಿಸಲಾಗುವುದು.

ವಿಶೇಷ ಸೂಚನೆ ಶಿಬಿರದಲ್ಲಿ ಬೆಳಿಗ್ಗೆ 9:00 ಗಂಟೆಗೆ ನೋಂದಾವಣಿ ಕಾರ್ಯ ಆರಂಭವಾಗುತ್ತದೆ


Share