ಗೌರಿ ದೇವಾಡಿಗ ಅವರಿಗೆ ಯಶಸ್ವಿ ಮಹಿಳೆ ಪುರಸ್ಕಾರ

ಪುಣೆ: ಪುಣೆ: ಯಶಸ್ವಿ ಮಹಿಳೆ ಪುರಸ್ಕಾರಕ್ಕೆ ಆಯ್ಕೆಯಾದ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ  ಶ್ರೀಮತಿ ಗೌರಿ ದೇವಾಡಿಗ ಅವರಿಗೆ ಪುಣೆ ದೇವಾಡಿಗ ಸಂಘದ ಏಳನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಏಕನಾಥೇಶ್ವರಿ ಟ್ರಸ್ಟ್ ನ ಅಧ್ಯಕ್ಷರಾದ ಅಣ್ಣಯ್ಯ ಶೇರಿಗಾರ್, ಸಂಘದ ಅಧ್ಯಕ್ಷರಾದ ನಾರಾಯಣ ದೇವಾಡಿಗ, ಪುಣೆ ದೇವಾಡಿಗ ಸಂಘದ ಮುಖ್ಯ ಸಲೆಹೆಗಾರ  ನರಸಿಂಹ ದೇವಾಡಿಗ ಹೆರಾಂಜಲು ಪ್ರಶಸ್ತಿಯನ್ನು ನೀಡಿ ಗೌರವಿಸಿದರು,

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪುಣೆ ಬಂಟ್ಸ್ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಪುಣೆ ಉದ್ಯಮಿ ಪುರಂದರ ಪೊಜಾರಿ, ಕರಾಡ ಉದ್ಯಮಿ ವಸಂತ ಅಣ್ಣ, ಉಪ್ಪುಂದ ದೇವಾಡಿಗ ಸಂಘದ ಗೌರವಾಧ್ಯಕ್ಷರಾದ ಜನಾರ್ಧನ್ ದೇವಾಡಿಗ ಮುಂಬೈ,  ಸ್ಥಾಪಕ ಅಧ್ಯಕ್ಷ ಪ್ರಭಾಕರ ದೇವಾಡಿಗ, ಉಪಾಧ್ಯಕ್ಷರಾದ ಮಹಾಬಲೇಶ್ವರ ದೇವಾಡಿಗ, ಸುಧಾಕರ ದೇವಾಡಿಗ ಹಾಗೂ ಸಂಘದ ಎಲ್ಲಾ ಸದಸ್ಯರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.

 


Share