ಯುವಕನ ವೈದ್ಯಕೀಯ ಚಿಕಿತ್ಸೆಗೆ ಬೇಕಾಗಿದೆ ಆಗತ್ಯ ಆರ್ಥಿಕ ನೆರವು

ಬೆಳ್ತಂಗಡಿ:  ತಾಲೂಕಿನ  ಗುಂಡೂರಿ   ಪೆರ್ಲಾಪು ಎಂಬಲ್ಲಿ ವಾಸವಾಗಿರುವ  ದಿವಂಗತ ರಾಜು ದೇವಾಡಿಗ ಇವರ 21 ಪ್ರಾಯದ ಪುತ್ರ ಪದ್ಮಪ್ರಸಾದ್ ಇವರು ಸುಮಾರು 2 ವರ್ಷದಿಂದ ಶ್ವಾಶಕೋಶದ ಕ್ಯಾನ್ಸರ್ ನಿಂದ  ಬಳಲುತಿದ್ದು ಇವರು ಮಂಗಳೂರಿನ MIO (MANGALORE INSTITUTION OF ONCOLOGY...)ಆಸ್ಪತ್ರೆ ಕರಂಗಲ್ಪಾಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,

ಇವರಿಗೆ ಈಗಾಗಲೇ ಸುಮಾರು 4ಲಕ್ಷದಷ್ಟು ಹಣ ಖರ್ಚಾಗಿದ್ದು, ಈಗ  ದಿನಕ್ಕೆ ಸುಮಾರು 4000 ದಷ್ಟು ಹಣ  ಇವರ ಔಷದೋಪಾಚಾರಕ್ಕೆ ಖರ್ಚಾಗುತಿದ್ದು, ಇವರಿಗೆ ವಾರಕ್ಕೆ ಒಂದು ಬಾರಿ 20000 ರೂಪಾಯಿಯ ಚುಚ್ಚುಮದ್ದು ಕೊಡಲಾಗುತಿದ್ದು ಹೀಗೆ ಇವರಿಗೆ 6 ಚುಚ್ಚುಮದ್ದು ಬೆಕೆಂದು ವೈದ್ಯರು ತಿಳಿಸಿರುತ್ತಾರೆ.

ಇವರು 10ಸೆಂಟ್ಸ್ ಜಾಗದಲ್ಲಿ ವಾಸವಾಗಿದ್ದ ಇವರ ತಾಯಿ ಬೀಡಿ ಕಟ್ಟಿ ಜೀವನಸಾಗಿಸುತ್ತಿದ್ದಾರೆ. ಇವರ ಮುಂದಿನ  ಚಿಕಿತ್ಸೆಗೆ ಸುಮಾರು 4 ಲಕ್ಷ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ,  

ಇವರ ಮುಂದಿನ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದ ಕಾರಣ   ಇವರಿಗೆ ಧನಸಹಾಯದ ಅಗತ್ಯವಿದೆ.

Padmaprasad,
STATE bank of INDIA
BRANCH name-venur
Account number 54060717572
Ifsc code SBIN0040908


Share